Haveri: Royal Enfield Bike Thieves Arrested | Public TV

2022-06-12 11

ಹಾವೇರಿಯ ರಾಣೇಬೆನ್ನೂರಿನಲ್ಲಿ ರಾಯಲ್ ಎನ್‍ಫೀಲ್ಡ್ ಬೈಕ್ ಕಳ್ಳರ ಹಾವಳಿಮಿತಿ ಮೀರಿತ್ತು. ಒಂದೂವರೆ ಎರಡು ಲಕ್ಷದ ಬೈಕ್ ಅನ್ನುಕ್ಷಣಮಾತ್ರದಲ್ಲಿ ಕದ್ದು ಎಸ್ಕೇಪ್ ಆಗ್ತಿದ್ರು. ಇದು ಜನರ ನಿದ್ದೆಗೆಡಿಸಿತ್ತು. ವಾರದಲ್ಲಿ ಕನಿಷ್ಠ 2-3 ಬೈಕ್ ಕಳವು ಪ್ರಕರಣ ದಾಖಲಾಗುತ್ತಿತ್ತು.. ಹೀಗಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ರಾಣೆಬೆನ್ನೂರು ನಗರಠಾಣೆ ಸಿಪಿಐ ಎಂ.ಐ.ಗೌಡಪ್ಪಗೌಡರ ಹಾಗೂ ಪಿಎಸ್‍ಐ ಸುನೀಲ ತೇಲಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಬೈಕ್ ಕಳ್ಳರ ಶೋಧಕ್ಕಿಳಿಯಲಾಯ್ತು. ಪೊಲೀಸರ ತಂಡದಿಂದ ದಾವಣಗೆರೆ ನಗರದ 20 ವರ್ಷದ ಮೊಹಮ್ಮದ ಸುಫಿಯಾನ ಖಾನ್ ಅಲಿಯಾಸ್ ಸುಫಿಯಾನ್, ದಾವಣಗೆರೆ ನಗರದ ಇಪ್ಪತ್ತು ಮೂರು ವರ್ಷದ ನಯಾಜ್ ಅಹಮ್ಮದ ಅಲಿಯಾಸ್ ನಯಾಜ್ ಮತ್ತು ಶಿಕಾರಿಪುರ ತಾಲೂಕಿನ ಮಲ್ಲಾಪುರ ಗ್ರಾಮದ ಮೂವತ್ತೊಂದು ವರ್ಷ ವಯಸ್ಸಿನ ಮೊಹಮ್ಮದ ಅಬೂಬಕರ್ ಸಿದ್ದಿಕ್ ಅಲಿಯಾಸ್ ಸಿದ್ದಿಕ್‍ನನ್ನು ಬಂಧಿಸಿದೆ. ಇದು ಜನರಲ್ಲಿ ಸಂತಸ ತಂದಿದೆ. ಅಲ್ಲದೇ, 10 ಲಕ್ಷಕ್ಕೂ ಅಧಿಕ ಮೌಲ್ಯದ 12 ಬೈಕ್‍ಗಳನು ವಶಕ್ಕೆ ಪಡೆಯಲಾಗಿದೆ.

#publictv #haveri #royalenfieldtheft